Shaakuntalam Trailer : ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ ಚಿತ್ರ ʼಶಾಕುಂತಲಂʼ ಟ್ರೇಲರ್‌ ಬಿಡುಗಡೆಯಾಗಿದೆ. ಅದ್ಭುತ ದೃಶ್ಯಗಳ ಜೊತೆಗೆ ಅಮೋಘ ಪ್ರೇಮಕಥೆಯ ಮೊದಲ ನೋಟ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ದುಷ್ಯಂತ ಶಕುಂತಲೆಯ ಪ್ರೇಮಕಥೆ, ಭರತನ ಜನ್ಮ ರಹಸ್ಯ, ಮಹಾಭಾರತ ಕಥೆಯನ್ನು ಓದಿದವರಿಗೆ ʼಶಾಕುಂತಲʼ ಸಿನಿಮಾ ಬಹುಬೇಗ ಅರ್ಥವಾಗುತ್ತದೆ. ಇದೀಗ ಮಹಾಕಾವ್ಯವನ್ನು ಓದದ ಜನರಿಗೂ ಶಾಕುಂತಲೆಯ ಪ್ರೇಮಕಥೆಯನ್ನು ಈ ಸಿನಿಮಾ ಹೇಳಲು ಹೊರಟಿದೆ.


COMMERCIAL BREAK
SCROLL TO CONTINUE READING

ನಿರ್ದೇಶಕ ಗುಣಶೇಖರ್ ʼಶಕುಂತಲಾʼ ಪ್ರೇಮಕಥೆಯನ್ನು ತೆರೆಯ ಮೇಲೆ ಅನಾವರಣಗೊಳಿಸಲು ಪ್ರಯತ್ನಿಸಿದ್ದು, ಇದರ ಭಾಗವಾಗಿಯೇ ಸಮಂತಾ ಜೊತೆ ಶಾಕುಂತಲಂ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಕೊನೆಗೂ ಈ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಈ ಟ್ರೈಲರ್‌ನಲ್ಲಿರುವ ದೃಶ್ಯಗಳು ಅದ್ಭುತವಾಗಿವೆ. ಮಣಿ ಶರ್ಮಾ ಅವರ ಸಂಗೀತ ಮನಸೆಳೆಯುವಂತಿದೆ. ಆಕ್ಷನ್ ಸೀಕ್ವೆನ್ಸ್ ಮತ್ತು ದೃಶ್ಯಗಳು ಕೂಡ ಅದ್ಭುತವಾಗಿವೆ. ಕೊನೆಗೆ ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಪುತ್ರಿ ಅಲ್ಲು ಅರ್ಹ ಎಂಟ್ರಿಯೇ ಪ್ರೇಕ್ಷಕರು ಸಿಳ್ಳೆ ಹೊಡೆಯೊದಂತು ಶತಸಿದ್ಧ. ಸಿಂಹದ ಮೇಲೆ ಕುಳಿತು ಎಂಟ್ರಿ ಕೊಡುವ ಅರ್ಹ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುತ್ತದೆ.


ಇದನ್ನೂ ಓದಿ: Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.